ಗುರುಕರುಣೆ - ಗುರುಸ್ಮರಣೆ
ಗುರುಕರುಣೆ - ಗುರುಸ್ಮರಣೆ
36 min read
Rate this book:
About This Book
ಲಕ್ಕಪ್ಪ. ಅ. ಶಿರಹಟ್ಟಿ ಅವರ ಸಮಗ್ರ ಸಾಹಿತ್ಯವನ್ನು ಕನ್ನಡಿಗರಿಗೆ ಲಭ್ಯವಾಗಿಸುವ ಸಲುವಾಗಿ ಈ ಪುಸ್ತಕವನ್ನು ಡಿಜಿಟಲೀಕರಿಸಲಾಗಿದೆ. ಇದನ್ನು ಸಾಧ್ಯವಾಗಿಸಿದ ಶಶಿಧರ ಶಿರಹಟ್ಟಿ ಹಾಗೂ ಕುಟುಂಬದವರಿಗೆ ಸಂಚಯ ಹಾಗೂ ಎಲ್ಲ ಕನ್ನಡಿಗರ ಪರವಾಗಿ ಧನ್ಯವಾದಗಳು. ಈ ಪುಸ್ತಕವನ್ನು #ServantsOfKnowledge ಡಿಜಿಟಲೀಕರಣ ಯೋಜನೆ ಅಡಿ, ಬೆಂಗಳೂರಿನ ಗಾಂಧಿ ಭವನದಲ್ಲಿ ಡಿಜಿಟಲೀಕರಿಸಲಾಗಿದೆ.
ಶ್ರೀ ಲಕ್ಕಪ್ಪ ಶಿರಹಟ್ಟಿ ಅವರು ವಿಜಾಪುರ ಜಿಲ್ಲೆಯ ತೊರವಿ ಯಲ್ಲಿ 1 ಜೂನ್ 1903 ರಂದು ಜನಿಸಿದರು. ಅಲ್ಲಿ ಮುಲ್ಕಿ ಪರೀಕ್ಷೆ ಹಾಗೂ ಧಾರವಾಡದ ಟ್ರೇನಿಂಗ್ ಕಾಲೇಜಿನಲ್ಲಿ ಉನ್ನತ ಶಿಕ್ಷಣ ಪಡೆದು, ವಿಜಯಪುರ ಜಿಲ್ಲೆಯ ವಿವಿಧೆಡೆ ಹಾಗೂ ಧಾರವಾಡದ ಪ್ರಾಕ್ಟಿಸಿಂಗ್ ಸ್ಕೂಲ್ ಗಳಲ್ಲಿ ಶಾಲಾ ಶಿಕ್ಷಕರಾಗಿ ಸೇವೆ ಸಲ್ಲಿಸಿದರು. 1946 ರಿಂದ 1958 ವರೆಗೆ ಅಸಿಸ್ಟೆಂಟ್ ಡೆಪ್ಯುಟಿ ಎಜ್ಯುಕೇಶನಲ್ ಇನ್ಸ್ಪೆಕ್ಟರ್ ಆಗಿದ್ದರು. ವಚನ ಪಿತಾಮಹ ಶ್ರೀ ಫ.ಗು. ಹಳಕಟ್ಟಿ ಅವರ ಸಹವರ್ತಿ ಗಳಾಗಿದ್ದ ಅವರು ಬಬಲೇಶ್ವರದ ಶ್ರೀ ಶಾಂತವೀರ ಶಿವಯೋಗಿಗಳ ಪ್ರೋತ್ಸಾಹದಿಂದ ಶರಣರು -ವಚನಕಾರರು ಹಾಗೂ ಐತಿಹಾಸಿಕ ವ್ಯಕ್ತಿಗಳ ಬಗ್ಗೆ ಹತ್ತೊಂಬತ್ತು ಕೃತಿಗಳನ್ನು ರಚಿಸಿದ್ದಾರೆ. ಬಂಥನಾಳ ಶ್ರೀ ಸಂಗನಬಸವ ಶಿವಯೋಗಿಗಳ ಪ್ರಕಟಣೆ ' ಅನುಭವ ಮಂಟಪ ' ಪತ್ರಿಕೆಯ ಸಂಪಾದಕರಾಗಿಯೂ ಸೇವೆ ಸಲ್ಲಿಸಿದ ಅವರನ್ನು ಮುಧೋಳದಲ್ಲಿ ಜರುಗಿದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಸನ್ಮಾನಿಸಲಾಗಿತ್ತು.
94 ವರ್ಷಗಳ ತುಂಬು ಜೀವನ ನಡೆಸಿದ ಲಕ್ಕಪ್ಪ ಶಿರಹಟ್ಟಿ ಅವರು 8 ಜೂನ್ 1997 ರಂದು ತೊರವಿ ಯಲ್ಲಿ ನಿಧನರಾದರು.

Buy This Book
As an Amazon Associate and Bookshop.org affiliate, BookOrb earns from qualifying purchases.
Write a Review
Sign in to write a review.